Wednesday, May 28, 2014

ಡಿ.ತುಮಾಕೂರು

ಹಾಸನ ಜಿಲ್ಲಾ ಕೇಂದ್ರದಿಂದ 71ಕಿ.ಮೀ ಹಾಗೂ ತಾಲ್ಲೂಕು ಕೇಂದ್ರ ಚನ್ನರಾಯಪಟ್ಟಣದಿಂದ 34ಕಿ.ಮೀ ದೂರದಲ್ಲಿರುವ ಡಿ.ತುಮಾಕೂರು ಗ್ರಾಮಕ್ಕೆ ಹಾಸನದಿಂದ ಚನ್ನರಾಯಪಟ್ಟಣ ಮಾರ್ಗವಾಗಿ ಹಿರೀಸಾವೆ, ಜಿನ್ನೇನಹಳ್ಳಿ, ಹೊಸಹಳ್ಳಿ, ಪುರ, ನರೀಹಳ್ಳಿ, ದಿಡಗ ಮಾರ್ಗದಲ್ಲಿ ಪ್ರಯಾಣಿಸಬೇಕು. ಗ್ರಾಮವನ್ನು ತುಂಬೆಗ ಎಂಬ ವ್ಯಕ್ತಿ ಹೊಯ್ಸಳರ ಕಾಲದಲ್ಲಿ ಊರಿನ ದೊಡ್ಡಕೆರೆಯಿಂದ ಸುತ್ತಮುತ್ತಲ ಹಳ್ಳಿಗಳಿಗೆ ನೀರಿನ ಹಂಚಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎಂಬ ಕಾರಣದಿಂದ ತುಂಬೆಗನ ಊರು ಎಂಬುದಾಗಿ ಹೆಸರಾಗಿತ್ತು. 2011ರ ಜನಗಣತಿಯ ಪ್ರಕಾರ ಗ್ರಾಮದಲ್ಲಿ 258 ಮನೆಗಳಿದ್ದು ಇಲ್ಲಿಯ ಜನಸಂಖ್ಯೆ 961 ಇದೆ. ಈ ಪೈಕಿಯಲ್ಲಿ ಗಂಡಸರು 442 ಹಾಗೂ ಹೆಂಗಸರು 519ಜನ ಇದ್ದಾರೆ.
ಗ್ರಾಮದ ಸಮಿಪದಲ್ಲಿರುವ ಕಬ್ಬಳಿಯಲ್ಲಿ ದೊರೆತಿರುವ ಕ್ರಿ..1186 ಸಾಸನದಲ್ಲಿ ಊರ ಹೆಸರನ್ನು ತುಂಮಕೂರ ಮಾರಗಾವುಂಡನಂ ಎಂಬುದಾಗಿ ಉಲ್ಲೇಖಿಸಿದೆ. ಕ್ರ..12ನೇ ಶತಮಾನದ ಶಾಸನದಲ್ಲಿ ಉಲ್ಲೇಖಿಸಿರುವಂತೆ ತುಂಬೆಗ ಎಂಬ ವ್ಯಕ್ತಿ  ಊರಿನ ದೊಡ್ಡಕೆರೆಯ ನೀರಿನ ಹಂಚಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎಂಬುದಾಗಿ ತಿಳಿಸುತ್ತದೆ ಒಂದು ಆದಾರದ ಮೇಲೆ ಕೆರೆಗೆ ಸುಮಾರು 800 ವರ್ಷಗಳ ಇತಿಹಾಸ ಇರಬಹುದು ಎಂದು ತಿಳಿಯುತ್ತದೆ.
ತುಂಬೆಗನ ಊರು ದಿನಕಳೆದಂತೆ ಮುಂದೆ ತುಂಬೆಗನ ಊರು, ತಮ್ಮೆಗೂರು, ತುಂಮಕುರ, ತುಂಮಕೂರ ಎಂಬ ಹೆಸರುಗಳಿಂದ ಗುರುತಿಸಿಕೊಳ್ಳುತ್ತ ಕಾಲಕ್ರಮೇನ ತುಮಕೂರು ಎಂದಾಗಿದೆ ಎಂಬುದಾಗಿ ತಿಳಿದುಬರುತ್ತದೆ.
ಗ್ರಾಮದಲ್ಲಿದ್ದ ಒಬ್ಬ ಬಡವ ಆಗರ್ಭ ಶ್ರೀಮಂತನೊಬ್ಬನಿಂದ ಸಾಲ ಪಡೆದಿದ್ದ. ಹಲವು ವರ್ಷಗಳು ಕಳೆದರೂ ಸಾಲ ತೀರಿಸಲಾಗುವುದಿಲ್ಲ. ಇದೇ ಕಾರಣಕ್ಕೆ ಆಗರ್ಭ ಶ್ರೀಮಂತ ಕೋಪಗೊಂಡು ಬಡವನ ಹತ್ತಿರ ಇದ್ದ ಒಂದು ನಾಯಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ. ಆಗರ್ಭ ಶ್ರೀಮಂತನನ್ನು ದಾರಿ ಮಧ್ಯ ಕಳ್ಳರು ಸುತ್ತುವರಿದಾಗ ಬಡವನ ನಿಯತ್ತಿನ ನಾಯಿ ಕಳ್ಳರೊಂದಿಗೆ ಸೆಣಸಾಡಿ ಅವರನ್ನು ಓಡಿಸುತ್ತದೆ. ನಂತರ  ಶ್ರೀಮಂತ ನಾಯಿಯ ನಿಯತ್ತಿಗೆ ಮನಸೋತು ನಿನ್ನ ನಾಯಿ ಮಾಡಿದ ಸಹಾಯಕ್ಕೆ ಉಪಕಾರವಾಗಿ ನಿನ್ನ ಸಾಲ ತೀರಿದಂತಾಗಿದೆ. ಆದ್ದರಿಂದ ನಿನ್ನ ನಾಯಿಯನ್ನು ನಿನ್ನಲ್ಲಿಗೆ ವಾಪಸ್ಸು ಕಳಿಸುತ್ತಿದ್ದೇನೆ ಎಂದು ಒಂದು ಓಲೆಯನ್ನು ಬರೆದು ನಾಯಿಯ ಕೊರಳಿಗೆ ಕಟ್ಟಿ ಕಳಿಸುತ್ತಾನೆ. ನಾಯಿ ತನ್ನ ಮಾಲೀಕ ಬಡವನ ಮನೆಗೆ ಹಿಂದಿರುಗುತ್ತದೆ. ನಾಯಿ ತನ್ನ ಮಾತು ಮೀರಿ ಶ್ರೀಮಂತನಿಗೆ ಮೋಸ ಮಾಡಿ ಬಂದಿದೆ ಎಂದು ಭಾವಿಸಿದ ಬಡನ, ತನ್ನ ನಾಯಿಯನ್ನು ಕೋಲಿನಿಂದ ಥಿವಿದು ಸಾಯಿಸುತ್ತಾನೆ ನಂತರ ಅದರ ಕುತ್ತಿಗೆಯಲ್ಲಿದ್ದ ಲೆಯನ್ನು ಬಿಚ್ಚಿ ಓದಿದ ಬಡವ ತನ್ನ ತಪ್ಪಿಗೆ ಪಶ್ಚಾತಾಪ ಪಡುತ್ತಾನೆ. ಒಂದು ಕಾರಣಕ್ಕೆ ನಾಯಿ ತುಮಕೂರು ಎಂದು ಸಹ ಕರೆಯುತ್ತಾರೆ.
ಚನ್ನರಾಯಪಟ್ಟಣ ತಾಲೂಕಿನ ಗಡಿಭಾಗದಲ್ಲಿ ದಿಡಿಗ ಸಮೀಪ  ಊರು ಇರುವ ಕಾರಣ  ಊರನ್ನು ದಿಡಿಗ ತುಮಕೂರು, ಡಿ.ತುಮಕೂರು ಎಂದು ಕರೆಯಲಾಗುತ್ತದೆ.
ಗ್ರಾಮದಲ್ಲಿ ಉಡಸಲಮ್ಮ ದೇವಿ ಕಲ್ಲೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಚಿಕ್ಕಮ್ಮದೇವಿ, ಏಳು ಮನೆಯಮ್ಮ ಹಾಗೂ ಕೆರೆಯ ಹಿಂಭಾಗದಲ್ಲಿ ಈಶ್ವರ ದೇವಾಲಯಗಳಿದ್ದು ವೀರಗಲ್ಲು, ಮಾಸ್ತಿಕಲ್ಲು, ವೀರಶಾಸನ ಹಾಗೂ ವಿಶೇಷವಾದ ಗಂಡುಬೇರುಂಡ ಸಹ ಇಲ್ಲಿದೆ.
ಕ್ರಿ. 12ನೆಯ ಶತಮಾದಲ್ಲಿ ರಚಿಸಿರುವ ಶಿಲಾಶಾಸನದಲ್ಲಿ ಹೊಯ್ಸಳರ ದೊರೆ ಎರಡನೇ ವೀರಬಲ್ಲಾಳ, ಸೆವುಣ ಜೈತಿಸಿವ ಅಥವಾ ಜೈತುಗಿ ಎಂಬ ದೊರೆಯೊಂದಿಗೆ ಸೊರಟೂರಿನಲ್ಲಿ ನಡೆದ ಉಗ್ರಕಾಳಗದಲ್ಲಿ ಶೌರ್ಯದಿಂದ ಹೋರಾಡಿ ಮಡಿದ  ಊರಿನ ಮಂಚೇಗೌಡ ಮುದ್ದಿಗೌಡಿಯರ ಮಕ್ಕಳಾದ ಸೌದೊರೆ ಮುಕುತಿ, ಮಾರಗೌಡಂಗಳ ತಮ್ಮಯ್ಯನ (ಮಂಚಯ್ಯನಿಗೆ)ನೆನಪಿನಾರ್ಥವಾಗಿ ವೀರಗಲ್ಲುನಿಲ್ಲಿಸಿದ ಬಗ್ಗೆ ಉಲ್ಲೇಖಿಸಲಾಗಿದೆ.

ಗ್ರಾಮದ ಕೆರೆ ಏರಿ ಹಿಂಭಾಗದಲ್ಲಿರುವ ಹರಿಹರ ದೇವಾಲಯಗಳು ನಿರ್ಮಾಣವಾಗಿರುವ ಬಗ್ಗೆ ಶಾಸನದಲ್ಲಿ ಉಲ್ಲೇಖವಾಗಿದೆ, ಆದರೆ ಗ್ರಾಮದಲ್ಲಿ ಹರಿ ದೇವರ ಮೂರ್ತಿ ಕಾಣೆಯಾಗಿದ್ದು, ಹರ ದೇವಾಲಯ ಮಾತ್ರ ಇದೆ. ಗ್ರಾಮದ ಹೆಳೆಯ ಹೆಸರು ಹೊಸಹಳ್ಳಿ ಎಂಬ ಹಳೆ ಗ್ರಾಮ ದ್ದ ಕುರುಹನ್ನು ಉಜರೆ ರಂಗನಾಥಸ್ವಾಮಿ ದೇಗುಲದ ಕುರುಹುಗಳು ತಿಳಿಸುತ್ತವೆ. ದೇವಾಲಯ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದು, ಗುಡ್ಡೆಯ ಮಾರ್ಪಟ್ಟಿದೆ. ಮಣ್ಣಿನ ಗುಡ್ಡೆಯ ಎದುರಿಗೆ ದೀಪದ ಕಲ್ಲು ಇದ್ದು ಇಲ್ಲಿ ದೇವಾಲಯಲಿದ್ದ ಕುರುಹನ್ನು ಸೂಚಿಸುತ್ತದೆ.

No comments:

Post a Comment