Wednesday, May 28, 2014

ಮಂಜರಬಾದ್ ಕೋಟೆ


ಕಣ್ಣು ಹಾಯಿಸಿದೆಡೆಯೆಲ್ಲ ಹಸಿರು ಹೊದ್ದ ಕಾಫಿ ತೋಟಗಳ ಕಂಪು, ಏಲಕ್ಕಿಯ ಇಂಪು, ಭತ್ತದ ಗದ್ದೆಗಳ ತಂಪು ಮನಸ್ಸಿಗೆ ಮುದ ನೀಡುತ್ತದೆ. ಪ್ರಮುಖ ಸಾಂಬರ್ ಪದಾರ್ಥಗಳ ಕೇಂದ್ರ, ಪಶ್ವಿಮ ಘಟ್ಟಗಳ ಬೆಟ್ಟ ಬಯಲು, ಹಳ್ಳ ಕೊಳ್ಳ ಕಂದರಿ ಜರಿ ಜಲಪಾತಗಳು ಕಾಶ್ವೀರದ ಕೈಗನ್ನಡಿಗೆ ಸಾಕ್ಷಿಯಾಗಿ ಅರಣ್ಯ ಸಂಪತ್ತು ಪ್ರಾಣಿ ಪಕ್ಷಿ ಸಂಕುಲವಿರುವ ಸದಾ ಹಸಿರಿನ ಉಸಿರಿನಿಂದ ಹುಟ್ಟುವ ತಂಗಾಳಿಯ ತಂಪು ಇಲ್ಲಿಯ ವಾಸಿಗಳಗಿಎ ಊಟಿಯ ವಾತಾವರಣವನ್ನು ನೀಡುತ್ತದೆ. ಮುಂಜಾನೆಯ ಮಂಜಿನ ನೋಟ, ಸಂಜೆಯ ಸೂರ್ಯಸ್ತಮದ ರಂಗು ಇಲ್ಲಿಯ ಸೌಂದರ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿ ಕಲೆ, ಸಾಹಿತ್ಯ, ಸಂಸ್ಕೃತಿ ಇತಿಹಾಸವನ್ನು ತನ್ನ ನಿಸರ್ಗದ ಸೆರಗಿನ್ಲಲಿ ಅದಗಿಸಿಟ್ಟು ಕೊಂಡಿರುವ ಸಕಲೇಶಪುರ ವಿಶ್ವದಲ್ಲೆ ವಿಶಿಷ್ಟ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಸಕಲೇಶಪುರದಿಂದ ಆಗ್ನೇಯಕ್ಕೆ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ 6ಕಿ.ಮೀ ಪ್ರಯಾನಿಸಿದರೆ ಸೀಗುವ ಗುಡ್ಡವೇ ಅಡಾಣಿ ಗುಡ್ಡ ಇದು ಸಮುದ್ರ ಮಟ್ಟದಿಂದ 3393ಅಡಿಗಳ ಎತ್ತರದಲ್ಲಿದ್ದು ಇದರ ಮೇಲೆ ನಿರ್ಮಿಸಿರುವ ಕೋಟೆ ಮಂಜರಾಬಾದ್ ಕೋಟೆ. ಈ ಕೋಟೆಯು ಅಷ್ಟಕೋನಾಕೃತಿಯ ನಕ್ಷತ್ರಾಕಾರದ ರಚನೆಯುಳ್ಳು ವಿಶಿಷ್ಟ ತಂತ್ರವನ್ನೊಳಗೊಂಡಿದೆ.
1669ರಲ್ಲಿ ಬ್ರಿಟಿಷರು ಪ್ರಪ್ರಥವಾಗಿ ಕಲ್ಕತ್ತಾದಲ್ಲಿ ಕಟ್ಟಿಸಿದ ಕೋಟೆಯ ಸ್ಪೂರ್ತಿಯಿಂದ ಅಡಾಣಿಗುಡ್ಡದ ಮೇಲೆ ಮೈಸೂರಿನ ಹುಲಿ ಎಂದು ಖ್ಯಾತಿಯನ್ನು ಪಡೆದ ಟಿಪ್ಪು ಸುಲ್ತಾನ್ ಮುಂಜರಾಬಾದ್ ಕೋಟೆಯನ್ನು ನಿರ್ಮಿಸಿದ. ಈ ಕೋಟೆಯನ್ನು ರಾಜಧಾನಿಯ ಮೇಲೆ ದಂಡೆತ್ತಿ ಯಾರಾದರೂ ವೈರಿಗಳು ಬಂದಾಗ ಗುಪ್ತವಾಗಿ ಕೊನೆಯ ಅಂತಹ ರಕ್ಷಣೆಗಾಗಿ ಮಾಡಿಕೊಂಡ ಟಿಪ್ಪುವಿನ ಗಿರಿದುರ್ಗ ಮಂಜರಾಬಾದ್ ಕೋಟೆವಿದು.
ಬ್ರೀಟಿಷರ ಸೈನ್ಯದ ಜನರಲ್ ಮ್ಯಾಥ್ಯೂಸನಿಗೂ ಟಿಪ್ಪುವಿಗೂ ಅನೇಕ ಬಾರಿ ಹಣಾ ಹಣಿ ನಡೆಯುತಿತ್ತು, ಅವರ ಮೇಲೆ 1783ರಲ್ಲಿ ವಿಜಯಿಯಾದ ಅದೇ ವರ್ಷದಲ್ಲಿ ಬ್ರೀಟಿಷರ ಇನ್ನೊಂದು ಸೈನ್ಯ ಕರ್ನಲ್ ಕ್ಯಾಂಬೆಲ್ನ ಕೈಕೆಗಳೆ ಬಂದು ಮಂಗಳೂರನ್ನು ವಶಪಡಿಸಿಕೊಂಡಿತ್ತು ಮತ್ತೆ ಟಿಪ್ಪು ತನ್ನ ದೊಡ್ಡ ಸೈನ್ಯೆದೊಂದಿಗೆ ಮಂಗಳೂರಿನಲ್ಲಿ ಅನೇಕ ಯುದ್ದ ಮಾಡಿ ವಿಜಯಿಯಾದ, ಹೀಗಾಗಿ ಮಂಗಳೂರು ಹೊನ್ನಾವರ ಟಿಪ್ಪುವಿನ ವ್ಯಾಪ್ತಿಗೆ ಬಂದವು 1784ರಲ್ಲಿ ಟಿಪ್ಪು ಬ್ರಿಟೀಷರನ್ನು ಎದುರಿಸಿದಾಗ ಈ ಮಂಗಳೂರು ಬಂದರು ತೀರ ಸಂಪರ್ಕ ಮಾಧ್ಯಮದ ಸ್ಥಳವಾಯಿತು. ಆಗಾಗ ಟಿಪ್ಪು ಮಂಗಳೂರಿಗೆ ಬೇಟಿ ನೀಡುವಾಗ ಬೆಳ್ತಂಗಡಿಯಿಂದ ಮುಂದೆ ಬಂದು ಐಗೂರಿನಲ್ಲಿ ತಂಗುತ್ತಿದ್ದ. ಈ ಸಮಾಯದಲ್ಲಿ ಬೇಕಲಕೋಟೆ ಪ್ರಬಲ ಆಡಳಿ ಕೇಂದ್ರವಾಗಿತ್ತು. ಆಗಾಗ ಆಕ್ರಮಣ ಮಾಡುತ್ತಿದ್ದ ಬ್ರೀಟಿಷಯನ್ನು ಮರ್ಥಿಸುವ ಶ್ರೀ ರಂಗಪಟ್ಟಣ, ಮಂಗಳೂರು ನಡುವೆ ಬಂದು ಸೈನ್ಯದ ಕೋಟೆ ತೀರ ಅನಿವಾರ್ಯವಾಯಿತು. ಆಗ ಈ ಅಡಾಣಿಗುಡ್ಡದ ಮೇಲೆ ಕೋಟೆಯನ್ನು ನಿರ್ಮಾಣಮಾಡಿದ.
ಅಡಾಣಿಗುಡ್ಡವೆಂದ್ದು ಕರೆಯುತ್ತಿದ್ದ ಈ ಸ್ಥಳಕ್ಕೆ ಟಿಪ್ಪುವಿನಿಂದ ಮಂಜರಾಬಾದ್ ಎಂದು ಹೆಸರು ಬಂದಿತ್ತು. 'ಮಂಜರಾಬಾದ್' ಎಂಬ ಪೂರ್ಣವಾಗಿ ಇಸ್ಲಾಂ ನಾಮಕರಣವಾದಿದೆ. ಈ ಕೋಟೆಯ ಮೇಲೆ ಟಿಪ್ಪು ಒಂದು ಪ್ರಾತಃ ಕಾಲ ಸೂರ್ಯೋದಯ ಸಮಯದಲ್ಲಿ ವಿಶಾಲವಾದ ಬಯಲಿನಲ್ಲಿ ಪ್ರಕೃತಿ ಸೌಂದರ್ಯ ರಮರಮಿಸುತ್ತಿತ್ತು. ಅಂಥ ಅದ್ಭುತ ದೃಶ್ಯ ಕಂಡ ಟಿಪ್ಪು ಓಹೋ ಮಂಜರ್, ಅಹಾ! ಮಂಜರ್ ಎಂದು ಕರೆದ. ಮಂಜರ್ ಎಂದರೆ ಅರಬ್ಬೀ ಭಾಷೆಯಲ್ಲಿ ರಮಣೀಯ ನೋಟಕ್ಕೆ ಆಶಯ ಎಂದೂ ಆಬಾದ್ ಎಂದರೆ 'ನೆಲೆಸಿದ ಸುಖಕರವಾದ' ಎಂದು ಅರ್ಥ ಒಟ್ಟಿನಲ್ಲಿ ಮಂಜರಾಬಾದ್ ಎಂದರೆ ಸುಖಕರವಾದ ರಮಣೀಯ ನಾಗರಿಕ ನೆಲೆ ಎಂದು ಅರ್ಥವನ್ನು ನೀಡುತ್ತದೆ.

ಈ ಕೋಟೆಯನ್ನು ಕ್ರಿ.ಶ 1784ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿ ಮತ್ತಿ ಕೆಲವು ದಿನ ನಿಲ್ಲಿಸಿ ಕ್ರಿ.ಶ 1792 ರಲ್ಲಿ ಪೂರ್ಣ ಕೋಟೆಯನ್ನು ಕಟ್ಟಿಸಿದನೆಂದು ಎರಡು ಪರ್ಷಿಯನ್ ಶಾಸನಗಳ ಆಧಾರದ ಮೇಲೆ ತಿಳಿಯುತ್ತದೆ. ಈ ಕೋಟೆಯು ಎರಡು ಹಂತದಲ್ಲಿ ನಿರ್ಮಾಣವನ್ನು ಮಾಡಿದ್ದು ಕೆಳಹಂತವನ್ನು ಕಲ್ಲುಗಳನ್ನು ಬಳಸಿ ಕಟ್ಟಿದರೆ ಮೇಲಿನ ಹಂತವನ್ನು ಇಟ್ಟಿಗೆ ಗಚ್ಚುಯನ್ನು ಬಳಸಿ ನಿರ್ಮಿಸಲಾಗಿದೆ.
ಟಿಪ್ಪುವಿಗೂ ಮುಚ್ಚೆ 1784ರಲ್ಲಿ ಬ್ರೀಟಿಷರನ್ನು ಎದುರಿಸುವಾಗ ಜಮಾಲಾಬಾದ್ ಈ ಕೋಟೆಯನ್ನು ನಿರ್ಮಾಣವನ್ನು  ಕಲ್ಲಿನಿಂದ ಕಾರ್ಯವನ್ನು ಆರಂಭಿಸಿದ ನಂತರ ಬ್ರೀಟಿಷರ ದಂದೆಗಳು ದಿನ ದಿಂದ ದಿನಕ್ಕೆ ಹೆಚ್ಚಾಗ ತೋಡಗಿತ್ತು ಆಗ ಅನಿವಾರ್ಯವಾಗಿ ಭದ್ರತಾ ಕೋಟೆ ಅವಶ್ಯಕರೆ ಇತ್ತು ಆಗ ಬೆಳ್ತಂಗಡಿಯ ಬಳಿ ಜಮಾಲಬಾದ್ ಎಂಬ ಕೋಟೆಯನ್ನು ನಿರ್ಮಾಣ ಮಾಡುವುದರ ಕಡೇ ಗಮನ ನೀಡ ಬಾಕಯಿತ್ತು. ಈ ಅರ್ಥಕ್ಕೆ ನಿಂತ ಕೋಟೆಯನ್ನು 1790ರಲ್ಲಿ ಪುನಃ ನಿರ್ಮಾಣ ಕಾರ್ಯವನ್ನು ಟಿಪ್ಪು ಮಾಡಿದ ಮುಕ್ಕಲು ಭಾಗ ಮುಗಿದಾಗ ಮತ್ತೆ ಯುದ್ಧಗಳ ಭೀತಿ ಹುಟ್ಟಿತು ಮುಂದೆ ಕೋಟೆ ನಿರ್ಮಣವನ್ನು ಸಂಪೂರ್ಣವಾಗಿ ಆಗಲೇ ಇಲ್ಲ, ಇದರಿಂದ ಕೋಟೆಯಲ್ಲಿನ ಪಾಕಶಾಲೆ, ಸೈನಿಕರ ತಂಗುದಾಣ ಕುದುರೆ ಲಾಯಗಳ ನಿರ್ಮಾಣ ಅರ್ಥಕ್ಕೆ ನಿಂತಿತ್ತು. ಇದರ ಬಗ್ಗೆ ಎರಡು ಪರ್ಷಿಯನ್ ಶಾಸನಗಳು ಮಾಹಿತಿಯನ್ನು ತಿಳಿಸುತ್ತದೆ.
ರಾಷ್ಟೀಯ ಹೆದಾರಿ (ಬೆಂಗಳೂರು-ಮಂಗಳೂರು) ಪಕ್ಕೆದಲ್ಲಿಯೇ 225ಅಡಿಗಳ ಎತ್ತರದಲ್ಲಿರುವ ಅಡ್ಡಾಣಿಗುಡ್ಡದ ಮೇಲೆ ಕಾಣಿಸುವ ಈ ಕೋಟೆ ಸುಮಾರು 30ಎಕರೆಯಷ್ಟು ವಿಸ್ತೀರ್ಣವಿದೆ. ಇದರ ನೆತ್ತಿಯ ಮೇಲೆ 350350ಅಡಿ ವಿಸ್ತಾರದ ನಕ್ಷತ್ರಾಕಾರದ ಕೋಟೆಯ ಹೊರಸುತ್ತಿನಲ್ಲಿ 1812 ಅಡಿ ಆಳದ ಕಲ್ಲು ಹಾಸಿನ ಕಂದಕ ಕಟ್ಟಲ್ಪಟಿದ್ದು, ಅದರೊಳಗೆ ನೀರು ಬಸಿದು ಹೊರಗೆ ಹೋಗುವಂತೆ ಚರಂಡಿ ವ್ಯವಸ್ಥೆಯಿದೆ. 8ಮೂಳೆಯ ನಕ್ಷತ್ರಾಕಾರದ ಕೋಟೆ ಇದಾಗಿದ್ದು 86 ಅಡಿ ಉದ್ದ 16 ಬಾಹುಗಳನ್ನು ಒಳಗೊಂಡಿದೆ. ಕೋಟೆಯ ಪ್ರತಿಯೋಂದು ಕೋನಕ್ಕೆ ತಲಾ 5ರಂತೆ 40 ಫಿರಂಗಿ ಬಾಯಿಗಳಿವೆ. ಇದರಲ್ಲಿ ಫಿರಂಗಿಗಳನ್ನು 60 ರಿಂದ 120 ಡಿಗ್ರಿಗಳ ಅಂತರದಲ್ಲಿ ತಿರುಗಿಸುತ್ತಾ ಪ್ರಯೋಗಿಸಬಹುದು. ಕೋಟೆಯಲ್ಲಿರುವ 9 ಕೊತ್ತಲಗಳಲ್ಲು ಬಂದೂಕಿನ ಕಿಂಡಿಗಳಿವೆ. 15 ಅಡಿ ಅಗಲದ ರ್ಯಾಂಪ್ ಕೋಟೆಯ ಒಳಭಾಗದಲ್ಲಿದ್ದು ಇದನ್ನು ಹತ್ತಲು 1 ಇಳಿಜಾರು ಹಾದಿ ಹಾಗೂ 1 ಮೆಟ್ಟಿಲಿನ ಹಾದಿವಿದೆ.
ಶ್ರೀವತ್ಸ ಎಸ್.ವಟಿಯವರ ಈ ಕೋಟೆಯ ಮೇಲೆ ಸಂಶೋಧನೆಯನ್ನು ಮಾಡಿದ್ದು ಇವರ ಪ್ರಕಾರ ಇಡೀ ಕೋಟೆಯ ಎಂಟು ಮೂಲೆಗಳು ಎಂಟು ದಿಕ್ಕುಗಳಿಗೆ ಚಾಚಿದ್ದು ಪ್ರತಿ ಯೋಂದು ಮೂಲೆಯೂ ಅತ್ಯಂತ ನಿಖರವಾಗಿ ಒಂದೊಂದು ಕಾಂತೀಯ ದಿಕ್ಕುಗಳನ್ನು ಪ್ರತಿನಿಧಿಸುತ್ತದೆ. ಈ ರೀತಿ ಇಡೀ ಕೋಟೆಯೇ ಒಂದು ದಿಕ್ಸೂಚಿಯಂತಿದೆ. ಹಾಗೂ ಕೋಟೆ ಮಧ್ಯೆದಲ್ಲಿ + ಆಕಾರದ ಬಾವಿ ಇದ್ದು ಇದರ ಕೆಂದ್ರವೇ ಇಡೀ ಕೋಟೆಯ ಕೇಂದ್ರವಾಗಿದೆ. ಈ ಕೋಟೆಯಿಂದ ಎಳೆದ ವೃತ್ತವು ಕೋಟೆಯ 8 ತುದಿಗಳನ್ನು ಹಾಯುತ್ತದೆ ಹಾಗೂ ಅತಿ ನಿಖರವಾದ ಆಳತೆಯ ಬಿಂದುಳಲ್ಲಿ ಈ ಕೋಟೆಯ ಕೊತ್ತಲಗಳು ಕಟ್ಟಲ್ಪಟ್ಟಿವೆ. ಹಾಗೇ ಇನ್ನೋಂದು ಚಿಕ್ಕ ವೃತ್ತವನ್ನು ಎಳೆದರೆ ಅದು ಕೋಟೆಯ ಒಳ ಮೂಲೆಗಳನ್ನು ಹಾಯುತ್ತದೆ. ಹೀಗೆ ಕೋಟೆಯ ಒಳಗಡೆ ಭಾವಿಯ ಸುತ್ತ ಕಟ್ಟಲ್ಪಟ್ಟಿರುವ ಮದ್ದಿನ ಮನೆ, ಒಣಗಿಸುವ ಕಟ್ಟೆ ಮುಂತಾದ ಎಲ್ಲ ಕಟ್ಟಡಗಳನ್ನು ರೇಖಾಗಣಿತ ಸೂತ್ರದ ಪ್ರಖಾರ ನಿಖರವಾದ ಬಿಂದುಗಳಲ್ಲಿ ಕಟ್ಟಲ್ಪಟಿವೆ.

ಈ ರೀತಿ ವಿಶಿಷ್ಟವಾದ ರಚನಾ ತಂತ್ರವು ಕ್ರಿ.ಶ 1644ರ ಮದ್ರಾಸ್ನಲ್ಲಿ ಪ್ರಥಮ ಬಾರಿಗೆ ಪ್ರಯೋಗಿಸಲ್ಪಟಿದೆ. 1696ರಲ್ಲಿ ಕಲ್ಕತ್ತಾದಲ್ಲು ಈ ಶೈಲಿ ಬಳಕೆಯಾಗಿದೆ. ಅಡಾಣಿಯ ಗುಡ್ಡದ ಪುರ್ವದಿಕ್ಕಿನಲ್ಲಿ ಕೋಟೆಯ ಕೆಳಹಂತದಿಂದ 900 ಡಿಗ್ರಿಯಲ್ಲಿ ರಚಿತವಾದ 252 ಮೆಟ್ಟಿಲುಗಳನ್ನು ಏರಿದರೆ ಹಿಂದೂ ಮತ್ತು ಮುಸ್ಲಿಂ ಶೈಲಿಯಲ್ಲಿರುವ ಮೊದಲನೆಯ ದ್ವಾರ ನೋಡಬಹುದಾಗಿದೆ. ದ್ವಾರವನ್ನು ಪ್ರವೇಶಿವನ್ನು ಮಾಡಿದರೆ ಹೊರಗಿನವರನ್ನು ಒಳಗೆ ಬಿಡುವಾಗ, ತಪಾಸಣೆ ಮಾದಲೆಂದು ಕಟ್ಟಡದ ಪರಿವೀಕ್ಷಾಣ ಕೊಠಡಿಗಳಿವೆ. ಇದರ ಮುಂದೆ ಸಾಗಿದರೆ ನಮಗೆ 2ನೆಯ ದ್ವಾರ ಸಿಗುತ್ತದೆ. ಈ ದ್ವಾರದಿಂದ ನೇರವಾಗಿ ಒಳಗೆ ಪ್ರವೇಶವನ್ನು ಮಾಡಲು ಒಂದು ಗುಪ್ತ ಮಾರ್ಗಸಹವಿದೆ. ಈ ಕೋಟೆಯನ್ನು ಪ್ರವೇಶವನ್ನು ಪಡೇಯಲು ಟಿಪ್ಪುನಿನ ಸೈನ್ಯದ ಗುರುತಿನ ಬಿಲ್ಲೆಯನ್ನು ತೋರಿಸಿ ಬಳಕ್ಕೆ ಹೋಗಬೇಕಿತ್ತು. ಇನ್ನೂ 3ನೆಯ ದ್ವಾರದಲ್ಲಿ ಕಲಾತ್ಮಕವಾಗಿ ನಿರ್ಮಾಣವನ್ನು ಮಾಡಿದ್ದು ಈ ದ್ವಾರವು 4025 ಹೊಂದಿದ್ದು ದ್ವಾರಬಂಧವು ಸುರುಳಿ ಆಕಾರದಲ್ಲಿರುವ ಬಳ್ಳಿ ಮತ್ತು ಹುಲಿಯ ಪಟ್ಟೆಗಳಿಂದ ಆತ್ಯಾಕರ್ಷಕ ಕೆತ್ತನೆ ಕೆಲಸ ಕಲೆಯಿಂದ ಅಲಂಕೃತವಾಗಿದೆ. ಚಾವಣಿಯಲ್ಲಿ ಕೋಟೆಯ ನೀಲಾ ನಕ್ಷೆಯನ್ನು ಬಿಡಿಸಲಾಗಿದೆ. ಕೋಟೆಯಲ್ಲಿರುವ 8 ಬುರುಜಗಳ ಒಳಗಿನಿಂದ 4 ದಿಕ್ಕಿನಲ್ಲಿಯೂ ನೋಡಿ ಕೋವಿಯಿಂದ ವೈರಿಯನ್ನು ಸದೆಬಡೆಯುವ ವ್ಯವಸ್ಥೆಯನ್ನು ಕಲ್ಲಿಸಲಗಿದೆ. ಈ ಬುರುಜುಗಳು ಹಿಂದೂ ಮುಸ್ಲಿಂ ಶೈಲಿಯಲ್ಲಿ ಅಚ್ಚುಕಟ್ಟಾಗಿ ನಿಮರ್ಾಣವನ್ನು ಮಾಡಲಾಗಿದೆ. ಕೋಟೆಯ ಒಳಾವರಣ ಸುಮಾರು 200ಅಡಿಗಳಿಂದ ಕೂಡಿದ್ದು ಕಮಾನು ಕಟ್ಟಡದ ಮೂಲೆಯಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡುತ್ತಿದ್ದ ಕೋಣೆಗಳನ್ನು ನೋಡಬಹುದಾಗಿದೆ.

ಕೋಟೆಯ ಮಧ್ಯಬಿಂಧುವಿನಲ್ಲಿರು + ಆಕಾರದ 40X40ಅಡಿಗಳ ಅಳತೆಯ 4 ದಿಕ್ಕುಗಳಲ್ಲಿಯೂ ಮೆಟ್ಟಿಲಿರುವ ಕೊಳವಿದ್ದು 40 ಅಡಿಗಳ ಆಳವಿದೆ. ಇದರಲ್ಲಿ ನೀರನ್ನು ಸಂಗ್ರಹವಾಗುತ್ತಿತ್ತು. ಈ ಕೊಳದ ಸ್ವಲ್ಪ ದೂರದಲ್ಲಿ ಪಿರಮಿಡ್ ಆಕೃತಿಯನ್ನು ಹೊಂದಿದ 10 ಅಡಿಗಳ ಮಳಿಗೆಯುಳ್ಳ ಮುದ್ದು ಸಂಗ್ರಸಿಡುವ 2 ಮದ್ದಿನ ಕೋಣೆಯನ್ನು ನೋಡಬಹುದಾಗಿದೆ.

ಪ್ರತಿ ನಿತ್ಯ ಈ ಒಂದು ಕೋಟೆಯನ್ನು ವಿಕ್ಷಣೆಯನ್ನು ಮಾಡಲು ಸುಮಾರು 500ಕ್ಕೂ ಹೆಚ್ಚು ಜನ ಬೇಟಿಯನ್ನು ನೀಡುತ್ತಿದ್ದಾರೆ. ಧರ್ಮಸ್ಥಳ ಸುಬ್ರಮಣ್ಯಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಇರುವ ಈ ಕೋಟೆ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ. ಈ ಕೋಟೆಯು ಭಾರತದ ಇತಿಹಾಸದಲ್ಲಿ ಕೋಣೆಯ ಕೋಟೆ ಎಂದು ಸಹ ಕರೆಯುತ್ತರೆ. ಇಲ್ಲಿಯ ಸುತ್ತ ಮುತ್ತಲಿನ ವಾಸಿಗಳಿಗೆ ಒಂದು ದಿನ ಪಿಕ್ ನಿಕ್ ಸ್ಥಳವಾಗಿದ್ದು ಸಿನಿಮಾಗಳ ಸೂಟಿಂಗ್ಗೆ ಒಂದು ಪಕ್ಕ ಸ್ಪಟ್ ಆಗಿದೆ. 

-ದ್ಯಾವನೂರು ಮಂಜುನಾಥ್

No comments:

Post a Comment